ಸರ್, ದಿನಾಂಕ - 07/04/25 ರಾತ್ರಿ 9:15 ಕ್ಕೆ ಪಿರಿಯಾಪಟ್ಟಣ ವಿಭಾಗದ ಒಂದು ಬಸ್, ಬಸ್ ನಂಬರ್ KA57F5534 ಮತ್ತೊಂದು ಬೇರೆ ವಿಭಾಗದ ಬಸ್ KA09F5072 ಒಟ್ಟು 2 ಬಸ್ಸುಗಳು ಒಂದೇ ಸಮಯಕ್ಕೆ, ಹೊಳೆನರಸೀಪುರ ಕಡೆಯಿಂದ ಬೇರ್ಯ ಮಾರ್ಗವಾಗಿ ಮೈಸೂರಿಗೆ ಬರುತ್ತಿದ್ದು, ಬೇರ್ಯ ಮುಖ್ಯ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಬಂದಿರುತ್ತದೆ ಇಲ್ಲಿ 6 ಜನ ಪ್ರಯಾಣಿಕರು ಸುಮಾರು 1 ಗಂಟೆ ಇಂದ ಕಾದು ಕುಳಿತಿದ್ದರು ಸಹ ಬಂದ ಬಸ್ ನಿಲ್ಲಿಸದೆ ಬಂದಿರುವುದು ತುಂಬಾ ತೊಂದರೆಯಾಗಿ ಪ್ರಯಾಣಿಕರು ಪರದಾಡುವಂತಾಗಿದೆ, ಈ ಬಸ್ಸನ್ನು ಕೆ ಆರ್ ನಗರ ದಲ್ಲಿ ನಮ್ಮ ಸ್ನೇಹಿತರಿಗೆ ಫೋನ್ ಮುಖಾಂತರ ವಿಷಯ ತಿಳಿಸಿ ವಿಚಾರಿಸಲು ಹೇಳಿದ್ದು, ಅವರು ವಿಚಾರಿಸಿದಾಗ ನಿಮ್ಮ ಡ್ರೈವರ್ ಮತ್ತು ಕಂಡಕ್ಟರ್ ನಮ್ಮ ಸ್ನೇಹಿತರೊಂದಿಗೆ ನಾವು ಅಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂದು ಗಲಾಟೆ ಮಾಡಿದ್ದು ನೀವು ಯಾರಿಗೆ ಬೇಕಾದರೂ ಕಂಪ್ಲೈಂಟ್ ಮಾಡಿಕೊಳ್ಳಿ ಎಂದು ಹೇಳಿರುತ್ತಾರೆ, ಇದರಿಂದ ತಿಂಗಳ ಪಾಸ್ ಮಾಡಿಸಿಕೊಂಡು ಕೆಲಸಕ್ಕೆ ಹೋಗುವವರಿಗೆ ಹಾಗೂ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗಿರುತ್ತದೆ, ದಯಮಾಡಿ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ, ಇನ್ನೂ ಮುಂದೆ ಇದೆ ರೀತಿ ಮುಂದುವರಿದರೆ ನಿಮಗಿಂತ ಮೇಲಾಧಿಕಾರಿಗಳಿಗೆ ಹಾಗೂ ರಾಜಕೀಯವಾಗಿ ಮುಂದುವರೆಯುವುದು ಎಂದು ಈ ಮೂಲಕ ತಿಳಿಸುತ್ತೇವೆ. ಧನ್ಯವಾದಗಳು
ಪ್ರಿಯ @LIKITH_GOWDA
07/04/25 ರಂದು ರಾತ್ರಿ 9:15 ಕ್ಕೆ ಪಿರಿಯಾಪಟ್ಟಣ ಮತ್ತು ಇನ್ನೊಂದು ವಿಭಾಗದ KA57F5534 ಮತ್ತು KA09F5072 ಬಸ್‌ಗಳು ಬೆರಿಯಾ ಬಸ್ ನಿಲ್ದಾಣದಲ್ಲಿ ನಿಲ್ಲಲು ವಿಫಲವಾದ ಕಾರಣ 6 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ನೀವು ವರದಿ ಮಾಡಿದ್ದೀರಿ. ಹೆಚ್ಚುವರಿಯಾಗಿ, ಪ್ರಶ್ನಿಸಿದಾಗ ಸಿಬ್ಬಂದಿ ಅಸಭ್ಯವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ. ದಯವಿಟ್ಟು awatar@ksrtc.org ನಲ್ಲಿ KSRTC ಗೆ ಅಧಿಕೃತ ದೂರು ಸಲ್ಲಿಸಿ ಅಥವಾ 080-08049596666 ಗೆ ಕರೆ ಮಾಡಿ. ಸಿಬ್ಬಂದಿಯ ದುರ್ವರ್ತನೆಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ವಿನಂತಿಸಿ ಮತ್ತು ಭವಿಷ್ಯದ ನಿಲ್ದಾಣಗಳ ಕುರಿತು ಭರವಸೆ ಪಡೆಯಿರಿ.
ಇನ್ನೂ ಸಹಾಯ ಬೇಕಾದರೆ, ನಮಗೆ ಪ್ರತ್ಯುತ್ತರಿಸಿ.